Saturday, March 12, 2016

Something for the nation! Something for yourself!


ಎಮರ್ಜೆನ್ಸೀ!


ಹೌದು! ಅಂದು ಭಾರತಕ್ಕೆ ದೊಡ್ಡ ಆಘಾತ. ಅಂದಿನ ಪ್ರಧಾನ ಮಂತ್ರಿ ಶ್ರೀಮತಿ ಇಂದಿರಾ ಗಾಂಧಿ ಎಮರ್ಜೆನ್ಸೀ ಜಾರಿಯಲ್ಲಿದೆ ಎಂದು ಆಕಾಶವಾಣಿಯಲ್ಲಿ ಹೇಳುತ್ತಿದ್ದಂತೆಯೇ ಎಲ್ಲಾ ಭಾರತೀಯರೂ ಒಂದು ನಿಮಿಷ ದಿಕ್ಕು ತೋಚದಂತಾಗಿತು. ಆಗ ತಾನೇ ಕಪಿಮುಷ್ಟಿಯಿಂದ ಭಾರತ ಹೊರಬರಲು ಇನ್ನೂ ಹೆಣಗುತ್ತಿತ್ತು ಹಳ್ಳಿಗಳಲ್ಲಿ ವಿದ್ಯುತ್ ಇರಲಿಲ್ಲ (ಈಗಲೂ ಕೆಲವು ಹಳ್ಳಿಗಳಲ್ಲಿ ಇಲ್ಲ! ಆ ಪ್ರಶ್ನೆ ಬೇರೆ) ವಿದ್ಯಾಭ್ಯಾಸದ ಕೊರತೆ ಸಂಚಾರಿ ವಾಹನಗಳ ಆಭಾವ, ಹೀಗೆ ಒಂದುದೊಡ್ಡ ಲಿಸ್ಟ್ ಬೆಳೆಯುತ್ತಾ ಹೋಗುತ್ತದೆ.

ನಾನು ಈ ಲೇಖನದಲ್ಲಿ ತುರ್ತು ಪರಸ್ಥಿತಿಯಿಂದಾದ  ಭಾರತದ ಮೇಲಿನ ಪ್ರಭಾವ ಮತ್ತು ಕಾಂಗ್ರೆಸ್ ಗೆ ಇದರಿಂದಾದ ಹಿನ್ನೆಡೆ ಈ ಎರಡು ವಿಷಯವನ್ನು ಇಲ್ಲಿ ಪ್ರಸ್ತುತ ಪಡಿಸುತ್ತಿದ್ದೆನೆ. 



















Saturday, February 13, 2016

ದೇಶ ಮೊದಲು

:ದೇಶ ಮೊದಲು:
ದೇಶಕ್ಕಾಗಿ ಪ್ರಾಣ ಕೊಡುತ್ತಿರುವ ಯೋಧರು ಒಂದೆಡೆಯಾದರೆ ದೇಶದ ಮಾನಹರಣ ಮಾಡುತ್ತಿರುವವರು ಇನ್ನೊಂದೆಡೆ!
ದೇಶದಲ್ಲಾಗುತ್ತಿರುವ ಇತ್ತೀಚಿನ ಬೆಳವಣಿಗೆಗಳನ್ನು ಗಮನಿಸಿದರೆ, ನಮ್ಮ ದೇಶ ಸ್ವಾತಂತ್ರವನ್ನು ನಾವು ಸರಿಯಾಗಿ ಬಲಿಸಿಕೊಳ್ಳುತ್ತಿಲ್ಲ ಎನ್ನುವದು ಸ್ಪಷ್ಟವಾಗಿ ತಿಳಿಯುತ್ತದೆ. ಜೆ.ಯೆನ್ ವಿಶ್ವವಿದ್ಯಾಲಯ(JNU) ವಿದ್ಯಾರ್ಥಿಗಳು "ಪಾಕಿಸ್ತಾನ ಜಿಂದಾಬಾದ್" ಎಂಬ ಘೋಷಣೆ ಕೂಗುತ್ತಿದ್ದುದ್ಡು ನೋಡಿ ಒಂದು ನಿಮಿಷ ನಿಜವಾಗಿಯೂ JNU ಭಾರತದ ವಿಶ್ವವಿದ್ಯಾಲಯವೋ ಅಥವಾ ಪಾಕಿಸ್ತಾನದ  ವಿಶ್ವವಿದ್ಯಾಲಯವೋ ಎಂಬುದು ತಿಳಿಯದೇ ಹೋಯಿತು."ಅಫ್ಜಲ್ ಗುರು ಹುತಾತ್ಮ" ಅಂತ ಘೋಷಣೆ ಕೂಗಿದ ದೇಶವಿದ್ರೋಹಿ ವಿದ್ಯಾರ್ಥಿಗಳು ಭಾರತದ ಪಾರ್ಲಿಮೆಂಟಿನ ಮೇಲೆ ದಾಳಿ ಮಾಡಿ ದೇಶಕ್ಕೆ ಕಪ್ಪುಚುಕ್ಕೆಯಾದ ಉಗ್ರನನ್ನು ಬೆಂಬಲಿಸಿದ ಪರಿ ನೋಡಿ ನಿಜಕ್ಕೋ  ಆಶ್ಚರ್ಯ ವಾಗುತ್ತದೆ.
ನಿಜವಾಗಿಯೂ ವಿದ್ಯಾರ್ಥಿಗಳು ಬಯಸುತ್ತಿರುವದಾದರೂ ಏನು? ಇನ್ನೊಂದು ಪಾರ್ಲಿಮೆಂಟ್ ಮೇಲೆ ದಾಳಿ? ಇಲ್ಲ ಎನ್ನುವದಾದರೆ, ವಿದ್ಯಾರ್ಥಿಗಳು ಘಂಟ ಘೋಷವಾಗಿ ಹೇಳುತ್ತಿರುವ "ಅಫ್ಜಲ್ ಗುರು ನಿನ್ನ ಆಸೆ ನಾವು ಈಡೇರಿಸುತ್ತೇವೆ, ಭಾರತ ಛಿದ್ರಗೊಳ್ಳುವತನಕ ನಾವು ಹೋರಾಟ ಮಾಡುತ್ತೇವೆ!! ವಿದ್ಯಾರ್ಥಿಗಳಿಗೆ ಅಫ್ಜಲ್ ಗುರು ನಿಜವಾಗಿಯೂ ಗುರು? ವಿದ್ಯಾರ್ಥಿಗಳು ದಿಕ್ಕುತಪ್ಪಿದ್ದಾರೆ ಎನ್ನುವುದು ಗೊತ್ತಾಗುತ್ತದೆ ವಿದ್ಯಾರ್ಥಿಗಳ ಪ್ರಕಾರ ಅಫ್ಜಲ್ ಗುರು ಗಲ್ಲಿಗೇರಿಸಿದ್ದು ಮಾನವೀಯತೆ ಅಲ್ಲ ಅನ್ನುವದಾದರೆ, ಅಫ್ಜಲ್ ಗುರು ದಾಳಿಗೆ 8 ಪೊಲೀಸರು ಜೀವತೆತ್ತರು. ಉಗ್ರನಿಗೆ ನಾವು ಮಾನವೀಯತೆ ಮೆರೆದು ಜೀವ ಭಿಕ್ಷೆ ನೀಡಬೇಕಿತ್ತೆ? ಭಾರತದಲ್ಲಿ ಯಡಪಂಕ್ತಿಯ ಜನರಿದ್ದಾರೆ. ಯಡಪಂಕ್ತಿಯ ಜನರನ್ನು ವಿದ್ಯಾರ್ಥಿಗಳು ಬಲಿಸಿಕೊಳ್ಳುತ್ತಿದ್ದಾರೆ. ಯಡಪಂಕ್ತಿಯ ಜನರು ಭಾರತದ ಸಂವಿಧಾನದಲ್ಲಿ ನಂಬಿಕೆಯುಳ್ಳವರು ಆದರೆ ವಿದ್ಯಾರ್ಥಿಗಳು ಯಡಪಂಕ್ತಿಯವರು ಎಂದು ಹೇಳಿಕೊಂಡು ದೇಶವಿರೋಧಿ ಚಟುವಟಿಕೆನಡೆಸುತ್ತಿರುವದು ನಿಜಕ್ಕೂ ದೇಶಕ್ಕೆ ಮಾರಕವೇ ಸರಿ.
ಎಲ್ಲಾ ಘಟನೆಗಳು ಒಂದೆಡೆ ಆದರೆ, ದೇಶದ್ರೋಹಿ ವಿದ್ಯಾರ್ಥಿಗಳನ್ನು ಬೆಂಬಲಿಸಿ ಮಾತನಾಡುವ ದೇಶದ್ರೋಹಿ ಹಿತಚಿಂತಕರು ಮತ್ತು ಸ್ವಾರ್ಥಿ ರಾಜಕಾರಣಿಗಳು ಇನ್ನೊಂದೆಡೆ. ದಲಿತರನ್ನು ಮುಂದಿಟ್ಟುಕೊಂಡು ದೊಂಬರಾಟ ಮಾಡಿ ವೋಟು ಪಡೆಯುವ ರಾಜಕಾರಣಿಗಳಿಗೆ ನನ್ನ ಧಿಕ್ಕಾರವಿರಲಿ. ನಮ್ಮ ದೇಶದಲ್ಲಿ ದಲಿತ ಎನ್ನುವದು ತುಂಬಾ ಸೂಕ್ಷ್ಮವಾದ ಪದ. ಇದನ್ನರಿತ ರಾಜಕಾರಣಿಗಳು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಆಗಾಗ್ಗೆ ದಲಿತರನ್ನು ಬಳಿಸಿಕೊಳ್ಳುತ್ತಾರೆ. ವೋಟಿಗಾಗಿ ಏನೆಲ್ಲಾ ಮಾಡಲು ರಾಜಕಾರಣಿಗಳು ಹೇಸುವದಿಲ್ಲ. ಜನರು ಸೂಕ್ಷ್ಮ ವಿಚಾರವನ್ನು ನಾವು ಮೊದಲು ತಿಳಿದುಕೊಳ್ಳಬೇಕು..!
ಕೊನೆಯದಾಗಿ ಒಂದು ಮಾತು, ಭಾರತಕ್ಕೆ ಉಗ್ರ ನಾಯಕನ ಅವಶ್ಯಕತೆ ಇಲ್ಲ. ದೇಶ ಪ್ರೇಮಿಯ / ದೇಶ ಭಕ್ತನ ಅವಶ್ಯಕತೆ ಇದೆ. ದೇಶ ಮೊದಲು ಎನ್ನುವ ವಿಚಾರಧಾರೆ ಇರುವ ನಾಯಕರು  ಬೇಕು. ದೇಶದ ಅಭಿರುದ್ಧಿಯ ಬಗ್ಗೆ  ಚಿಂತನೆ ಇರುವ ನಾಯಕರು ಬೇಕು. ದೇಶಕ್ಕೆ ಒಡೆದು ಆಳುವ ನೀತಿಯ ವಿಚಾರ ಹೊಂದಿರುವ ನಾಯಕರು ಬೇಕಿಲ್ಲ.. 
ಒಂದು ಮಾತು ಮಾತ್ರ ನಿಜ ವಿದ್ಯಾರ್ಥಿಗಳು ದೇಶಕ್ಕೆ ಮಾರಕ !!
                                                                      -ಜೈಹಿಂದ್
                                                                                                   MD Harish